ನಮ್ಮ ಜೀವನದುದ್ದಕ್ಕೂ, ನಾವು ಅನೇಕ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತೇವೆ.
ಇಂತಹ ಬಿಕ್ಕಟ್ಟಿನ ಕಾಲದಲ್ಲಿ, ತಂದೆಯ ಕಾಲದಲ್ಲಿದ್ದ ನಂಬಿಕೆಯ ಪೂರ್ವಜರು ಯೆಹೋವ ದೇವರನ್ನು ಕರೆದು ರಕ್ಷಿಸಲ್ಪಟ್ಟರು, ಮಗನ ಕಾಲದಲ್ಲಿದ್ದ ದೇವಜನರು ಯೇಸು ಕ್ರಿಸ್ತನ ಹೆಸರನ್ನು ಕರೆದು ರಕ್ಷಿಸಲ್ಪಟ್ಟರು ಮತ್ತು ಪವಿತ್ರಾತ್ಮನ ಕಾಲದಲ್ಲಿ, ನಾವು ರಕ್ಷಿಸಲ್ಪಡಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಕರೆಯಬೇಕು.
ದೇವರು ತನ್ನ ಹೆಸರನ್ನು ತಿಳಿದಿರುವವರು ನಿಜವಾದ ಜನರು ಎಂದು ಹೇಳಿದರು ಮತ್ತು ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಆತ್ಮರಕ್ಷಣೆಯ ಮೊದಲ ಹೆಜ್ಜೆಯಾದ ದೀಕ್ಷಾಸ್ನಾನವನ್ನು ನಡೆಸಲು ನಮಗೆ ಆದೇಶಿಸಿದರು.
ಇಂದು, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಮಾತ್ರ ಆತ್ಮರಕ್ಷಣೆ ಮತ್ತು ಪಾಪಗಳ ಕ್ಷಮೆಯ ವಾಗ್ದಾನವನ್ನು ಹೊಂದಿರುವ ಪವಿತ್ರಾತ್ಮ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಹೆಸರಿನಲ್ಲಿ ಜನರಿಗೆ ದೀಕ್ಷಾಸ್ನಾನ ಕೊಡುತ್ತದೆ.
“ಕರ್ತನಾದ ಯೆಹೋವನು ಹೀಗೆಂದುಕೊಳ್ಳುತ್ತಾನೆ - ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.”
ಯೆಶಾಯನು 52:4-6
“ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; . . . ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.”
ಪ್ರಕಟನೆ 3:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ