ದೇವರ ಶಕ್ತಿಯಿಂದ, ಇಸ್ರಾಯೇಲ್ಯರು ಐಗುಪ್ತ ದೇಶದ 430 ವರ್ಷಗಳ ಕಾಲದ ದಾಸತ್ವದಿಂದ ಬಿಡುಗಡೆ ಹೊಂದಿದರು ಮತ್ತು ಕಾನಾನಿನ ಕಡೆಗೆ ಹೊರಟರು. ಎಷ್ಟಾದರೂ, ಇಸ್ರಾಯೇಲ್ಯರು ತಮ್ಮನ್ನು ಬಿಡುಗಡೆಗೊಳಿಸಿದ ದೇವರ ಅನುಗ್ರಹವನ್ನು ಮರೆತುಬಿಟ್ಟರು.
"ನೀವು ನಮ್ಮನ್ನು ಐಗುಪ್ತದಿಂದ ಈ ಅರಣ್ಯಕ್ಕೆ ಏಕೆ ಕರೆತಂದಿದ್ದೀರಿ?"
ದೂರು ನೀಡಿದ ಜನರು ಉರಿಮಂಡಲಗಳಿಂದ ಕಚ್ಚಿಸಿಕೊಂಡು ಸತ್ತರು. (ಅರಣ್ಯ 21:6)
ಯೆಹೋವನು ಅವನಿಗೆ - ನೀನು [ತಾಮ್ರದಿಂದ] ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು; ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು ಎಂದು ಆಜ್ಞಾಪಿಸಿದನು. ಅರಣ್ಯ 21:8
ಹಾಗಾದರೆ, ತಾಮ್ರ ಸರ್ಪವು ಅವರನ್ನು ರಕ್ಷಿಸಿತೇ?
ಇಲ್ಲ, "ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು" ಎಂಬ ದೇವರ ಮಾತುಗಳಿಂದ ದೇವರು ಅವರನ್ನು ರಕ್ಷಿಸಿದರು.
ಅದಾಗ್ಯೂ, ಇಸ್ರಾಯೇಲ್ಯರು ಅದು ರಹಸ್ಯವಾದ ಶಕ್ತಿಯನ್ನು ಹೊಂದಿದೆ ಎಂದು ಯೋಚಿಸುತ್ತಾ, ನೂರಾರು ವರ್ಷಗಳ ಕಾಲ ತಾಮ್ರ ಸರ್ಪವನ್ನು ಆರಾಧಿಸಿದರು.
ಅರಸ ಹಿಜ್ಕೀಯನು ತಾಮ್ರ ಸರ್ಪವನ್ನು ಚೂರುಚೂರು ಮಾಡಿದಾಗ, ದೇವರು ಅವನನ್ನು ಪ್ರಶಂಶಿಸಿದರು ಮತ್ತು ಅವನು ಎಲ್ಲಿಗೆ ಹೋದರೂ ಕೃತಾರ್ಥನಾಗಿ ಬರುವಂತೆ ಮಾಡಿದರು. (2 ಅರಸು 18:3–7)
ತಾಮ್ರ ಸರ್ಪವನ್ನು ಚೂರುಚೂರು ಮಾಡಿದ ಹಿಜ್ಕೀಯನನ್ನು ದೇವರು ಏಕೆ ಹೊಗಳಿದರು?
ಅದೇಕೆಂದರೆ ವಿಗ್ರಹವನ್ನು ಆರಾಧಿಸುವವನು ನಾಶವಾಗುತ್ತಾನೆ.
ತಾಮ್ರ ಸರ್ಪವನ್ನು ಆರಾಧಿಸುವ ಇತಿಹಾಸವು, ಸಭೆಗಳು ಶಿಲುಬೆಯನ್ನು ಇಟ್ಟುಕೊಂಡು ನಾಶವಾಗುತ್ತವೆ ಎಂಬ ಪ್ರವಾದನೆಯಾಗಿದೆ.
“ಮೋಶೆಯು ಅಡವಿಯಲ್ಲಿ ಆ ಸರ್ಪವನ್ನು ಎತ್ತರದಲ್ಲಿಟ್ಟ ಹಾಗೆಯೇ . . . ಮನುಷ್ಯಕುಮಾರನು . . . ಎತ್ತರದಲ್ಲಿಡಲ್ಪಡಬೇಕು.” ಯೋಹಾ 3:14–15
ನಮ್ಮನ್ನು ರಕ್ಷಿಸಿದ್ದು ಶಿಲುಬೆಯಲ್ಲ, ಆದರೆ ಯೇಸುವಾಗಿದ್ದಾರೆ. (1 ಪೇತ್ರ 1:18–19)
ಎಷ್ಟಾದರೂ, ಇಸ್ರಾಯೇಲ್ಯರು ತಾಮ್ರ ಸರ್ಪವನ್ನು ಆರಾಧಿಸಿದಂತೆ, ಇಂದು, ಸಭೆಗಳು ಶಿಲುಬೆಯನ್ನು ಆರಾಧಿಸುತ್ತವೆ.
ತಾಮ್ರ ಸರ್ಪವು ಒಂದು ತಾಮ್ರದ ತುಂಡಿನಂತೆಯೇ ಶಿಲುಬೆಯು ಮರದ ತುಂಡು ಹೊರತು ಬೇರೇನೂ ಅಲ್ಲ.
ಶಿಲುಬೆಯನ್ನು ಇಟ್ಟುಕೊಳ್ಳುವ ಸಭೆಗಳು ನಾಶವಾಗುತ್ತವೆ. (ಧರ್ಮೋ 27:15)
"ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು;" ಪ್ರಕ 18:4
ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಬೋಧನೆಗಳನ್ನು ಹಿಂಬಾಲಿಸುತ್ತಾ, ಚರ್ಚ್ ಆಫ್ ಗಾಡ್, ತಾಮ್ರ ಸರ್ಪವು ಶಿಲುಬೆ ಆರಾಧನೆಯ ಪ್ರವಾದನೆಯಾಗಿದೆ ಎಂದು ಎಲ್ಲಾ ಜನರಿಗೆ ತಿಳಿಸುತ್ತಿದೆ.
ದಯವಿಟ್ಟು, ಪವಿತ್ರಾತ್ಮನ ಕಾಲದ ರಕ್ಷಕರಾದ ತಾಯಿ ದೇವರು ನೆಲೆಸಿರುವ ಚೀಯೋನ್ ಅಂದರೆ ಚರ್ಚ್ ಆಫ್ ಗಾಡ್’ಗೆ ಬನ್ನಿ ಹಾಗೂ ನೀವು ಕೊನೆಯ ವಿಪತ್ತಿನಿಂದ ತಪ್ಪಿಸಿಕೊಂಡು ರಕ್ಷಣೆಯನ್ನು ಹೊಂದುವಿರಿ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ