ಎಲ್ಲಾ ಸಭೆಗಳು ತಮ್ಮ ಪಂಗಡವನ್ನು ಲೆಕ್ಕಿಸದೆ ದೇವರನ್ನು “ತಂದೆ” ಎಂದು ಉಲ್ಲೇಖಿಸಲು ಒಪ್ಪಿಕೊಳ್ಳುತ್ತವೆ.
ಇತಿಹಾಸದುದ್ದಕ್ಕೂ, ಮನುಕುಲವು ಒಬ್ಬರೇ ದೇವರಾದ ತಂದೆ ದೇವರನ್ನು ಆರಾಧಿಸುತ್ತದೆ ಮತ್ತು ನಂಬುತ್ತದೆ, ಆದರೆ ಮನುಕುಲವು ಜೀವವನ್ನು ಸ್ವೀಕರಿಸಲು ಮತ್ತು ನಿತ್ಯ ಪರಲೋಕರಾಜ್ಯವನ್ನು ಪ್ರವೇಶಿಸಲು, ತಾಯಿ ದೇವರ ಅಸ್ತಿತ್ವವು ಅತ್ಯಗತ್ಯ ಎಂದು ಸತ್ಯವೇದವು ನಮಗೆ ಪದೇ ಪದೇ ಕಲಿಸಿದೆ.
ಎಲ್ಲಾ ಜೀವಿಗಳು ತಾಯಿ ದೇವರ ಮೂಲಕ ಜೀವವನ್ನು ಹೊಂದಲು ಯೋಜಿಸಲಾಗಿದೆ ಎಂದು ನಾವು ಗ್ರಹಿಸಿಕೊಳ್ಳುವಂತೆ ಉದ್ದೇಶಿಸುತ್ತಾ, ದೇವರು ಸಮುದ್ರದ ಮೀನುಗಳನ್ನು, ಭೂಮಿಯ ಮೇಲಿರುವ ಪ್ರಾಣಿಗಳನ್ನು, ಆಕಾಶದ ಪಕ್ಷಿಗಳನ್ನು, ಸಸ್ಯಗಳ ಲೋಕವನ್ನು ಮತ್ತು ಮನುಷ್ಯರು ಸಹ ತಾಯಿಯ ಮೂಲಕ ಜೀವವನ್ನು ಸ್ವೀಕರಿಸಲು ಸೃಷ್ಟಿಸಿದರು.
ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾರೆ.
ಪ್ರಕಟನೆ 4:11
ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
ಆದಿಕಾಂಡ 1:27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ