ಹೊಸ ಒಡಂಬಡಿಕೆಯ ಪಸ್ಕದ ಮೂಲಕ ನಾವು ದೇವರ ಕಡೆದೆ ತಿರುಗಿಕೊಂಡರೆ, ನಾವು ಪಾಪಕ್ಷಮೆಯನ್ನು ಮತ್ತು ನಿತ್ಯಜೀವವನ್ನು ಸ್ವೀಕರಿಸುತ್ತೇವೆ. ಆದರೆ, ಯಾರಾದರೂ ದೇವರ ಒಡಂಬಡಿಕೆಯಲ್ಲಿ ನಿಲ್ಲದಿದ್ದರೆ, ದೇವರು ಅವರನ್ನು ಬಿಟ್ಟುಹೋಗುತ್ತಾರೆ. ಅಂತಿಮವಾಗಿ, ರಾಜ ಸೌಲ ಮತ್ತು ಇಸ್ಕರಿಯೋತ ಯೂದನಿಗೆ ಆದಂತೆ
ದುರಾತ್ಮಗಳು ಅವರನ್ನು ಪ್ರವೇಶಿಸುತ್ತವೆ ಮತ್ತು ಅವರು ಶೋಚನೀಯ ಅಂತ್ಯವನ್ನು ಎದುರಿಸಬೇಕಾಗುತ್ತದೆ.
ಹಿಜ್ಕೀಯ ರಾಜನು “ಪಸ್ಕವನ್ನು ಆಚರಿಸಿ, ದೇವರ ಕಡೆಗೆ ತಿರುಗಿಕೊಳ್ಳಿ” ಎಂದು ಪ್ರಕಟನೆಯೊಂದಿಗೆ ದೂತರನ್ನು ಕಳುಹಿಸಿದಾಗ ಉತ್ತರ ಇಸ್ರಾಯೇಲಿನ ಜನರು ಅವರನ್ನು ಅಪಹಾಸ್ಯ ಮಾಡಿ, ಗೇಲಿ ಮಾಡಿದರು.
ಕೊನೆಯಲ್ಲಿ, ಆ ಜನರು ನಾಶವಾದರು. ಇಂದು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಜನರು, ಉತ್ತರ ಇಸ್ರಾಯೇಲಿನ ಜನರಂತೆಯೇ ಅದೇ ಅಂತ್ಯವನ್ನು ಎದುರಿಸಬೇಕಾಗುತ್ತದೆ.
ಲೋಕದಲ್ಲಿ ಅನೇಕ ಸಭೆಗಳಿದ್ದರೂ, ದೇವರ ವಾಗ್ದಾನವಾದ ಪಸ್ಕವನ್ನು ಆಚರಿಸುವ ಸಭೆ ಮಾತ್ರ
ದೇವರ ಕಡೆಗೆ ತಿರುಗಿಕೊಂಡಿದೆ ಮತ್ತು ದೇವರು ಅವರೊಂದಿಗೆ ಇರುವ ಸಭೆಯಾಗಿ ಆಶೀರ್ವದಿಸಲ್ಪಡುತ್ತದೆ
ಎಂದು ಹೇಳಬಹುದು.
ತರುವಾಯ ಹಿಜ್ಕೀಯನು - ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕವನ್ನಾಚರಿಸುವದಕ್ಕಾಗಿ ಯೆರೂಸಲೇವಿುನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು ಎಲ್ಲಾ ಇಸ್ರಾಯೇಲ್ಯರಿಗೂ ಯೆಹೂದ್ಯರಿಗೂ ಎಫ್ರಾಯೀಮ್ಯರಿಗೂ ಮನಸ್ಸೆಯರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು . . . ಅಬ್ರಹಾಮ್ ಇಸಾಕ್ ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ . . . 2 ಪೂರ್ವಕಾಲವೃತ್ತಾಂತ 30:1–6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ