ನಾವು ಒಳ್ಳೆಯದನ್ನು ಬಿತ್ತಿದರೆ, ನಾವು ಖಂಡಿತವಾಗಿ ಒಳ್ಳೆಯ ಫಲಿತಾಂಶಗಳನ್ನು ಕೊಯ್ಯುತ್ತೇವೆ ಮತ್ತು ನಾವು ಕೆಟ್ಟದ್ದನ್ನು
ಬಿತ್ತಿದರೆ, ಕೆಟ್ಟ ಫಲಿತಾಂಶಗಳನ್ನು ಕೊಯ್ಯುತ್ತೇವೆ.
ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿ ಗುಣುಗುಟ್ಟಿ ಇಸ್ರಾಯೇಲ್ಯರು ನಾಶವಾದ ಇತಿಹಾಸ ಮತ್ತು ಚಿಕ್ಕ ದಾವೀದ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರು ಕೃಪೆಯಿಂದ ತುಂಬಿದ ನಂಬಿಕೆಯ ಮಾತುಗಳ ಮೂಲಕ ಸಂತೋಷವನ್ನು ಅರ್ಪಿಸಿ ದೇವರಿಂದ ಬಹಳವಾಗಿ ಆಶೀರ್ವದಿಸಲ್ಪಟ್ಟ ಇತಿಹಾಸವನ್ನು ನಾವು ನೆನಪಿಸಿಕೊಳ್ಳಬೇಕು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳಿಗೆ ಅನುಗುಣವಾಗಿ, ಚರ್ಚ್ ಆಫ್ ಗಾಡ್ ಸದಸ್ಯರು ಯಾವಾಗಲೂ ಮನೆಯಲ್ಲಿ, ಸಭೆಯಲ್ಲಿ ಮತ್ತು ಸಮಾಜದಲ್ಲಿ ಒಳ್ಳೆಯ ಕಾರ್ಯಗಳು ಮತ್ತು ಸದ್ಗುಣದ ಮಾತುಗಳ ಮೂಲಕ ಸಾಂತ್ವನ ಮತ್ತು ಬೆಂಬಲವನ್ನು ನೀಡುತ್ತಾರೆ.
ಇಂದು, ಅವರು ಭಾರವಾದ ಜೀವನದಿಂದ ದಣಿದವರೊಂದಿಗೆ, “ಇನ್ನು ಮುಂದೆ ಮರಣ ಅಥವಾ ಸಂಕಟ ಅಥವಾ ನೋವು ಇಲ್ಲದಿರುವ ಪರಲೋಕ ರಾಜ್ಯವಿದೆ.” ಎಂದು ದೇವರ ಆತ್ಮರಕ್ಷಣೆಯ ಸಂತೋಷದಾಯಕ ಸುದ್ದಿಯನ್ನು ಹಂಚಿಕೊಳ್ಳಲು ಹುರುಪಿನಿಂದ ಮುನ್ನಡೆಯುತ್ತಾರೆ.
ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯ ವಸ್ತುಗಳನ್ನು ತೆಗೆಯುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟ ವಸ್ತುಗಳನ್ನು ತೆಗೆಯುತ್ತಾನೆ.
ಇದಲ್ಲದೆ ನಾನು ನಿಮಗೆ ಹೇಳುವದೇನಂದರೆ ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು.
ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪುಹೊಂದುವಿ ಅಂದನು.
ಮತ್ತಾಯನು 12:35-37
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ