ಮೋಶೆಯು ಯೇಸುವಿನ ವಾಸ್ತವತೆಯ ಪ್ರವಾದನೆಯ ಪೂರ್ವ ವ್ಯಕ್ತಿಯಾಗಿದ್ದಾನೆ.
ಮೋಶೆಯು ತನ್ನ ಕೈಗಳನ್ನು ಮೇಲಕ್ಕೆ ಎತ್ತಿದ್ದರಿಂದ, ರೆಫೀದೀಮಿನಲ್ಲಿ ನಡೆದ ಯುದ್ಧದಲ್ಲಿ
ಇಸ್ರಾಯೇಲ್ಯರು ಜಯಗಳಿಸಿದರು. ಇದು, ಯೇಸು ಶಿಲುಬೆಯಲ್ಲಿ ಎತ್ತಲ್ಪಟ್ಟಂತೆ,
ದೇವರ ಜನರು ಸೈತಾನನ ವಿರುದ್ಧದ ಆಧ್ಯಾತ್ಮಿಕ ಯುದ್ಧದಲ್ಲಿ ಗೆಲ್ಲುತ್ತಾರೆ
ಎಂಬುದರ ಪ್ರವಾದನೆಯಾಗಿದೆ.
ವಿಷಪೂರಿತ ಸರ್ಪಗಳಿಂದ ಗಾಯಗೊಂಡು, ಇಸ್ರಾಯೇಲ್ಯರಲ್ಲಿ
ಅನೇಕರು ಸತ್ತುಹೋದಾಗ, ದೇವರು “ನೀನು [ತಾಮ್ರದಿಂದ]
ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು.
ಗಾಯಗೊಂಡವರು ಅದನ್ನು ನೋಡಬಹುದು ಮತ್ತು ಬದುಕಬಹುದು” ಎಂದು ಹೇಳಿದರು.
ಎಷ್ಟಾದರೂ ಅವರು ತಮ್ಮನ್ನು ಬದುಕಿಸಿದ ದೇವರ ವಾಕ್ಯಗಳ ಶಕ್ತಿಯನ್ನು ಮರೆತು
ತಾಮ್ರದ ಸರ್ಪವನ್ನು 800 ವರ್ಷಗಳ ನಂತರವೂ ಪೂಜಿಸಿದರು.
ಪರಿಣಾಮವಾಗಿ, ಅವರು ದೇವರನ್ನು ರೇಗಿಸಿದರು.
ಇದು, ಕ್ರಿಸ್ತನು ತನ್ನ ತ್ಯಾಗದ ಮೂಲಕ ಸ್ಥಾಪಿಸಿದ ಹೊಸ ಒಡಂಬಡಿಕೆಯನ್ನು ಮರೆತು
ಇಂದು ಶಿಲುಬೆಯನ್ನು ಆರಾಧಿಸುವ ಜನರು ನಾಶವಾಗುತ್ತಾರೆ
ಎಂಬುದನ್ನು ತೋರಿಸುವ ಛಾಯೆಯಾಗಿದೆ.
ನಾವು ಶಿಲುಬೆಗಳನ್ನು ಇಡುವುದು ದೇವರ ಚಿತ್ತವಲ್ಲ.
ಆದಿ ಕ್ರೈಸ್ತರಿಗೆ, ಶಿಲುಬೆಯು ಯೇಸುವನ್ನು ಸಾಯಿಸಿದ
ಶಾಪಗ್ರಸ್ತ ಮರವಲ್ಲದೆ ಬೇರೆ ಏನೂ ಅಲ್ಲವಾಗಿದೆ.
ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹವೂ ಲೋಹ ವಿಗ್ರಹವೂ
ಯೆಹೋವನಿಗೆ ಹೇಯವಾದದ್ದರಿಂದ ಅವನ್ನು ಮಾಡಿಸಿ
ಗೋಪ್ಯವಾಗಿ ನಿಲ್ಲಿಸಿಕೊಂಡವನಾದರೂ
ಶಾಪಗ್ರಸ್ತ ಅನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು.
ಧರ್ಮೋಪದೇಶಕಾಂಡ 27:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ