ಜನರು ಈ ಭೂಮಿಯ ಮೇಲಿನ ತಮ್ಮ ಜೀವನದ ಅಂತ್ಯವು ಎಲ್ಲದರ ಅಂತ್ಯ ಎಂದು ಭಾವಿಸುತ್ತಾರೆ, ಆದರೆ ಪರಲೋಕ ಮತ್ತು ನರಕ ಅಸ್ತಿತ್ವದಲ್ಲಿವೆ ಮತ್ತು ಮೂರನೇ ಆಯಾಮದ ಲೋಕದಲ್ಲಿ ಅವರ ಜೀವನವು ಕೊನೆಗೊಂಡಾಗ, ಅವರೆಲ್ಲರೂ ತಮ್ಮ ಮೂಲ ಲೋಕಕ್ಕೆ ಹಿಂತಿರುಗುತ್ತಾರೆ. ಯೇಸು ಶಿಲುಬೆಯ ಮೇಲೆ ಮನುಕುಲದ ಪಾಪಗಳನ್ನು ಹೊತ್ತುಕೊಂಡು ತನ್ನ ಪ್ರೀತಿಯ ಮಕ್ಕಳನ್ನು ದಂಡನೆಯ ಸ್ಥಳವಾದ ನರಕಕ್ಕೆ ಅಲ್ಲ, ಆದರೆ ಪರಲೋಕಕ್ಕೆ ಮುನ್ನಡೆಸುವದಕ್ಕಾಗಿ ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದರು.
ಸತ್ಯವೇದದಲ್ಲಿ ವಿವರಿಸಿದಂತೆ ನರಕವು ಬಹಳ ಯಾತನೆಯ ಸ್ಥಳವಾಗಿದೆ. ಈ ಕಾರಣದಿಂದಲೇ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಹೊಸ ಒಡಂಬಡಿಕೆಯನ್ನು ಮತ್ತೊಮ್ಮೆ ಪ್ರಕಟಿಸಿದ್ದಾರೆ, ಮನುಕುಲಕ್ಕೆ ಪರಲೋಕರಾಜ್ಯದಲ್ಲಿ ಶಾಶ್ವತ ಮಹಿಮೆಯನ್ನು ಆನಂದಿಸುವ ಅವಕಾಶವನ್ನು ನೀಡಿದ್ದಾರೆ.
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ . . . ಇಬ್ರಿಯರಿಗೆ 9:27
ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು. . . ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು. ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. ಪ್ರಕಟನೆ 20:10-14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ