ನಾವು ಹೊಸ ಒಡಂಬಡಿಕೆಯ ಸುವಾರ್ತೆಯನ್ನು ನಂಬಿದರೆ, ದೇವರ ನಿಯಮವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮತ್ತು ಅದನ್ನು ಕೈಗೊಂಡರೆ, ನಾವು ನಿತ್ಯಜೀವವನ್ನು ಸ್ವೀಕರಿಸಿ ರಾಜವಂಶಸ್ಥರಾದ ಯಾಜಕರಾಗಬಹುದು ಮತ್ತು ದೇವರ ರಾಜ್ಯಕ್ಕೆ ಬಾಧ್ಯರಾಗಬಹುದು.
ಇದಲ್ಲದೆ, ದೇವರ ನಿಯಮವು ನಮ್ಮನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಹೊಸ ಯೆರೂಸಲೇಮಿನ ಪರಲೋಕ ತಾಯಿಯ ಬಳಿಗೆ ಮುನ್ನಡೆಸುತ್ತಾ, ನಮ್ಮನ್ನು ನಿತ್ಯ ಆತ್ಮರಕ್ಷಣೆಗೆ ಮಾರ್ಗದರ್ಶಿಸುತ್ತದೆ.
“ನಾವು ದೇವರ ನಿಯಮವನ್ನು ಕೈಗೊಳ್ಳುವ ಅಗತ್ಯವಿಲ್ಲ” ಎಂಬ ನಂಬಿಕೆಯು ಅಂತಿಮವಾಗಿ ಭೂಮಿಯ ಮೇಲೆ ಅನೇಕ ವಿಪತ್ತುಗಳಿಗೆ ಕಾರಣವಾಯಿತು ಎಂದು ಯೆಶಾಯನು ಸೇರಿದಂತೆ ಪ್ರವಾದಿಗಳು ನಮಗೆ ಹೇಳುತ್ತಾರೆ.
ದೇವರ ನಿಯಮವನ್ನು ಸೂಚಿಸಿದಂತೆ ಕೈಗೊಳ್ಳುವವರು ಉಲ್ಲಾಸ, ಸಂತೋಷ ಮತ್ತು ಸಮಾಧಾನವನ್ನು ಅನುಭವಿಸುತ್ತಾರೆ, ಆದರೆ ದೇವರ ನಿಯಮವನ್ನು ತಿರಸ್ಕರಿಸುವವರು ತಮ್ಮ ಆಲೋಚನೆಗಳ ಫಲವಾಗಿ ವಿಪತ್ತುಗಳು ಮತ್ತು ಶಾಪಗಳನ್ನು ಎದುರಿಸುತ್ತಾರೆ.
ಆದಕಾರಣ, ಜನಾಂಗಗಳೇ, ಕೇಳಿರಿ! ಜನಸಮೂಹವೇ, ಅವರಲ್ಲಿ ನಡೆದದ್ದನ್ನು ಮನಸ್ಸಿಗೆ ತಂದುಕೋ!
ಭೂಲೋಕವೇ, ಕೇಳು! ಆಹಾ, ಈ ಜನರು ನನ್ನ ಮಾತುಗಳನ್ನು ಕೇಳದೆ ನನ್ನ ಧರ್ಮಬೋಧನೆಯನ್ನು ಅಸಡ್ಡೆ ಮಾಡಿದ್ದರಿಂದ ಇವರ ಆಲೋಚನೆಗಳ ಫಲವಾದ ಕೇಡನ್ನು ಇವರ ಮೇಲೆ ಬರಮಾಡುವೆನು.
ಯೆರೆಮೀಯನು 6:18-19
ಯಾವಾಗ ಕೊಡುವನಂದರೆ ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.
2 ಥೆಸಲೋನಿಕದವರಿಗೆ 1:7-8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ