ಸೈತಾನನು ದೇವಜನರನ್ನು ಪರಲೋಕದಿಂದ ಈ ಭೂಮಿಗೆ ದೊಬ್ಬಲು ಮೋಸಗೊಳಿಸಿದನು ಮತ್ತು ಅವರು ಎಂದಿಗೂ ಪರಲೋಕರಾಜ್ಯಕ್ಕೆ ಹಿಂತಿರುಗಲು ಸಾಧ್ಯವಾಗದಂತೆ ಅವರನ್ನು ಮೋಸಗೊಳಿಸುತ್ತಲೇ ಇದ್ದನು.
ಇದಕ್ಕಾಗಿ, ದೇವಜನರು ಆತನನ್ನು ಆರಾಧಿಸುವುದನ್ನು ತಡೆಯಲು ಅವನು ಸಬ್ಬತ್ ಮತ್ತು ಪಸ್ಕವನ್ನು ನಿರ್ಮೂಲಗೊಳಿಸಿದನು ಮತ್ತು ಭಾನುವಾರದ ಆರಾಧನೆ ಮತ್ತು ಕ್ರಿಸ್ಮಸ್ನಂತಹ ಸೂರ್ಯ ದೇವನ ಪದ್ಧತಿಗಳನ್ನು ದೇವರ ಆಲಯದಲ್ಲಿ ಪರಿಚಯಿಸಿದನು.
ಎಲೀಯನು ದೇವರಿಗೆ ಅರ್ಪಿಸಿದ ಆರಾಧನೆಯ ಮೂಲಕ 850 ಸುಳ್ಳು ಪ್ರವಾದಿಗಳನ್ನು ಸೋಲಿಸಿದನು ಮತ್ತು ಯೇಸು “ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು” ಎಂಬ ವಾಕ್ಯಗಳಿಂದ ಸೈತಾನನನ್ನು ಜಯಿಸಿದರು. ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು, ಹೊಸ ಒಡಂಬಡಿಕೆಯನ್ನು ಅನುಸರಿಸುವ ಮೂಲಕ, ನಾವು ಪಾಪಗಳ ಕ್ಷಮೆಯನ್ನು ಸ್ವೀಕರಿಸಲು ಮತ್ತು ನಿತ್ಯ ಪರಲೋಕರಾಜ್ಯಕ್ಕೆ ಹಿಂತಿರುಗಲು ದೇವರನ್ನು ಮಾತ್ರ ಆರಾಧಿಸಬಹುದು ಎಂದು ನಮಗೆ ಕಲಿಸಿದ್ದಾರೆ.
ನೀವು ವಾಸವಾಗಿದ್ದ ಐಗುಪ್ತದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್ದೇಶದ ಆಚರಣೆಗಳನ್ನೂ ನೀವು ಅನುಸರಿಸಬಾರದು; ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು. ಯೆಹೋವನೆಂಬ ನಾನೇ ನಿಮ್ಮ ದೇವರಾಗಿರುವದರಿಂದ ನನ್ನ ನಿರ್ಣಯಗಳ ಪ್ರಕಾರವೇ ನೀವು ನಡೆಯಬೇಕು, . . . . . . ಆ ಆಜ್ಞಾವಿಧಿಗಳ ಮೂಲಕ ಬದುಕುವರು. ಆದದರಿಂದ ನೀವು ಅವುಗಳನ್ನೇ ಅನುಸರಿಸಬೇಕು; ನಾನು ಯೆಹೋವನು. ಯಾಜಕಕಾಂಡ 18:3-5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ